Ad Widget

ಸುಳ್ಯ: ಪಡಿತರ ಅಕ್ಕಿಯಲ್ಲಿ ಪತ್ತೆಯಾದ ವಿಚಿತ್ರ ಕಾಳು| ಇದು ಪ್ಲಾಸ್ಟಿಕ್ ಅಕ್ಕಿಯೇ!?

ಸಮಗ್ರ ನ್ಯೂಸ್: ಸರ್ಕಾರದಿಂದ ವಿತರಿಸಲಾದ ಪಡಿತರ ಅಕ್ಕಿಯಲ್ಲಿ ಅಕ್ಕಿ ರೂಪದ ವಿಚಿತ್ರ ಕಾಳುಗಳು ಪತ್ತೆಯಾಗಿದ್ದು ನಕಲಿ ಅಕ್ಕಿಯೇ ಎಂಬ ಅನುಮಾನ ಮೂಡಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಅಕ್ಕಿ ಪತ್ತೆಯಾಗಿದ್ದು, ಇಲ್ಲಿನ ಗ್ರಾ.ಪಂ ಸದಸ್ಯೆ ಸುಶೀಲ ಎಂಬವರು ಈ ಕುರಿತು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಬಾಳಿಲ ಪ್ರಾ.ಕೃ.ಪ ಸಂಘದಿಂದ ವಿತರಿಸಲಾದ ಅಕ್ಕಿಯನ್ನು ಅನ್ನಮಾಡಲೆಂದು ಬಿಸಿಲಿಗೆ ಒಣಹಾಕಿದ್ದ ವೇಳೆ ಈ ಅಕ್ಕಿ ಪತ್ತೆಯಾಗಿದೆ. ವಿತರಿಸಲಾದ ಅಕ್ಕಿಯ ನಡುವೆ ಈ ವಿಚಿತ್ರ ಅಕ್ಕಿ ಪತ್ತೆಯಾಗಿದ್ದು, ನೀರಿಗೆ ಹಾಕಿದಾಗ ಕೊಂಚ ಉಬ್ಬಿದಂತೆ ಆಗುತ್ತದೆ. ಅಕ್ಕಿಯನ್ನು ಹುರಿದಾಗ ಅರಳದೇ ಕರಟಿದ ರೀತಿಯಾಗುತ್ತದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಅಕ್ಕಿಯ ಬಗ್ಗೆ ಯಾವುದೇ ರೀತಿಯ ಸ್ಪಷ್ಟತೆ ಇಲ್ಲದಿದ್ದು, ಆಹಾರ ಇಲಾಖೆ ಈ ಕುರಿತು ‌ಮಾಹಿತಿ ನೀಡಬೇಕಿದೆ. ಇಲ್ಲವಾದಲ್ಲಿ ಜನಸಾಮಾನ್ಯರಿಗೆ ಗೊಂದಲ ಉಂಟಾಗಬಹುದು.

Leave a Comment

Your email address will not be published. Required fields are marked *