ರಾಹುಲ್ ಗಾಂಧಿ ವಾಟ್ಸಾಪ್ ಚಾನೆಲ್ ಆರಂಭ/ ಆರಂಭವಾದ ದಿನವೇ 42 ಲಕ್ಷ ಸದಸ್ಯರ ಸೇರ್ಪಡೆ

ವಾಟ್ಸಾಪ್‍ನ ಹೊಸ ವಿಶೇಷತೆ ವಾಟ್ಸಾಪ್ ಚಾನೆಲ್ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ರಾಜಕೀಯ ನಾಯಕರುಗಳಿಗೆ ಹೊಸದೊಂದು ವೇದಿಕೆಯನ್ನು ನಿರ್ಮಿಸುತ್ತಿದೆ. ಇದೀಗ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಗೊಂಡಿದ್ದು, ಮೊದಲನೇ ದಿನವೇ ದಾಖಲೆಯ ಜನರು ಸೇರ್ಪಡೆಯಾಗಿದ್ದಾರೆ.

Ad Widget ... ..

ದೆಹಲಿ ಕಾಂಗ್ರೆಸ್ ಸಮಿತಿ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಿಸಿದ್ದು, ಈ ಚಾನೆಲ್‍ಗೆ ಆರಂಭದ ದಿನವೇ 42 ಲಕ್ಷ ಜನರು ಸೇರಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಬೆಂಬಲಿಸುವವರು ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಸೇರ್ಪಡೆಗೊಳ್ಳಬಹುದು ಎಂದು ತಿಳಿಸಲಾಗಿದೆ.

Ad Widget

Leave a Comment

Your email address will not be published. Required fields are marked *