ಕುಶಾಲನಗರ: ಹೋಟೆಲ್ ಗೆ ನುಗ್ಗಿದ ಟ್ಯಾಂಕರ್

ಸಮಗ್ರ ನ್ಯೂಸ್: ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ಇದ್ದಕ್ಕಿದ್ದಂತೆ ಅಂಗಡಿಯೊಳಗೆ ನುಸುಲಿರುವ ಘಟನೆ ನ. 21ರ ನಡು ರಾತ್ರಿ 1ಗಂಟೆ ಸಮಯದಲ್ಲಿ ವರದಿಯಾಗಿದೆ.

Ad Widget ... ..

ಕುಶಾಲನಗರ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದಲ್ಲಿ (ಮಸೀದಿ ಸಮೀಪ) ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹಂಸ ಎಂಬುವವರ ಹೋಟೆಲ್ ಒಳಗೆ ನುಗ್ಗಿ ನಿಂತುಕೊಂಡಿದೆ. ಇದರಿಂದಾಗಿ ಹೋಟೆಲ್ ನ ಮುಂಭಾಗ ಸಂಪೂರ್ಣವಾಗಿ ಹಾಗೂ ಅದರ ಒತ್ತಿನಲ್ಲಿರುವ ಕೆ.ಕೆ. ಸೌಂಡ್ಸ್ ಶಾಮಿಯಾನದ ಅಂಗಡಿ ಹಾನಿಗೊಳಗಾಗಿವೆ.

Ad Widget

ಅದೃಷ್ಟವಶಾತ್ ಹೋಟೆಲ್ ಮತ್ತು ಕೆ.ಕೆ. ಸೌಂಡ್ಸ್ ಶಾಮಿಯಾನದ ಅಂಗಡಿಯೊಳಗೆ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ತಪ್ಪಿದೆ.

Leave a Comment

Your email address will not be published. Required fields are marked *