ಭಾರತ – ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭ/ ಉಭಯ ಪ್ರಧಾನಿಗಳ ಸಂತಸ

ಸಮಗ್ರ ನ್ಯೂಸ್: ತ್ರಿಪುರಾದ ನಿಶ್ಚಿಂತ್‍ಪುರ್ ಮತ್ತು ನೆರೆಯ ಬಾಂಗ್ಲಾದೇಶದ ಗಂಗಾಸಾಗರ್ ನಡುವೆ ನೂತನ ರೈಲು ಸಂಚಾರ ಆರಂಭವಾಗಿದ್ದು, ಇದನ್ನು ಎರಡು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಜಂಟಿಯಾಗಿ ವರ್ಚುವಲ್ ಆಗಿ ಉದ್ಘಾಟಿಸಿದರು.

Ad Widget ... ..

ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈಶಾನ್ಯ ರಾಜ್ಯ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ರೈಲು ಸಂಪರ್ಕ ಆಗಿದೆ ಎಂದು ಮೋದಿ ಹೇಳಿದರು. ಇದರ ಜೊತೆಗೆ ಖುಲ್ನಾ – ಮೊಂಗ್ಲಾ ಬಂದರು ರೈಲು ಯೋಜನೆ ಮತ್ತು ಬಾಂಗ್ಲಾದೇಶದ ರಾಂಪಾಲ್‍ನಲ್ಲಿರುವ ಮೈತ್ರಿ ಸೂಪರ್ ಪವರ್ ಪ್ಲಾಂಟ್‍ನ 2ನೇ ಘಟಕವನ್ನು ಕೂಡ ಉದ್ಘಾಟಿಸಲಾಯಿತು.

Ad Widget

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮಾತನಾಡಿ, ಈ ಮೂರು ಯೋಜನೆಗಳು ಉಭಯ ದೇಶಗಳ ನಡುವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತಷ್ಟು ಬಲ ತುಂಬಲಿದೆ. ನಾವು ಸ್ನೇಹ ಮತ್ತು ಸಹಯೋಗದ ಗಟ್ಟಿಯಾದ ಸಂಬಂಧ ಹೊಂದಿರುವುದನ್ನು ಜಂಟಿಯಾಗಿ ಚಾಲನೆ ಮಾಡಿರುವುದು ತೋರಿಸುತ್ತದೆ ಎಂದು ಹೇಳಿದರು. ಈ ಮೂರು ಯೋಜನೆಗಳು ಭಾರತದ ನೆರವಿನಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಕಾರ್ಯಗಳಾಗಿವೆ.

Leave a Comment

Your email address will not be published. Required fields are marked *