ಸುಳ್ಯ:ನಗರ ಪಂಚಾಯತ್ ನ ಹಿರಿಯ ವಾಲ್ ಮೆನ್ ಶ್ರೀಜೇಶ್ ಜಯನಗರ ಅವರಿಗೆ ಬೀಳ್ಕೊಡುಗೆ ಸಮಾರಂಭ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್ ನ ಹಿರಿಯ ವಾಲ್ ಮೆನ್ ಶ್ರೀಜೇಶ್ ಜಯನಗರ ಅ.31 ರಂದು ಸೇವಾ ನಿವೃತ್ತರಾಗಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

Ad Widget ... ..

1995 ರಲ್ಲಿ ನಗರ ಪಂಚಾಯತ್ ನ ನೀರು ಸರಬರಾಜು ಕೇಂದ್ರದಲ್ಲಿ ದಿನಗೂಲಿ ನೌಕರರಾಗಿ ಸೇವೆಗೆ ಸೇರಿದ ಅವರು 2005ರಲ್ಲಿ ಖಾಯಂ ನೌಕರರಾದರು. ಬಳಿಕ 2007 ರಲ್ಲಿ ಸುಳ್ಯದಿಂದ ಉಳ್ಳಾಲಕ್ಕೆ ವರ್ಗಾವಣೆಗೊಂಡು, 2014 ರಲ್ಲಿ ಅವರು ಮತ್ತೆ ಸುಳ್ಯಕ್ಕೆ ವರ್ಗಾವಣೆಗೊಂಡರು.

Ad Widget

ಅವರಿಗೆ ಸುಳ್ಯನಗರ ಪಂಚಾಯತ್ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಮುಖ್ಯಾಧಿಕಾರಿ, ಸಿಬ್ಬಂದಿಗಳು ಶ್ರೀಜೇಶ್ ರನ್ನು ಸನ್ಮಾನಿಸಿದರು.

Leave a Comment

Your email address will not be published. Required fields are marked *