ಮಡಿಕೇರಿ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿತ| ಚಿಕ್ಕೋಡಿ‌ ಮೂಲದ ಮೂವರು ಕಾರ್ಮಿಕರು ಸಾವು

ಸಮಗ್ರ ನ್ಯೂಸ್: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಬರೆ ಮಣ್ಣು ಕುಸಿದು ಮೂವರು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಗರದ ಸ್ಟಿವರ್ಟ್ ಹಿಲ್ ಬಳಿ ವರದಿಯಾಗಿದೆ.

Ad Widget ... ..

ಬಸಪ್ಪ,ಲಿಂಗಪ್ಪ, ಆನಂದ ಮೃತ ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಚಿಕ್ಕೊಡಿ ಮೂಲದವರೆಂದು ತಿಳಿದು ಬಂದಿದೆ.

Ad Widget

ಕಟ್ಟಡದ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಬರೆ ಮಣ್ಣು ಕುಸಿದಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಮಡಿಕೇರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಒಬ್ಬರ ಮೃತದೇಹವನ್ನು ಮೇಲೆತ್ತಲಾಯಿತು. ಮತ್ತಿಬ್ಬರ ಮೃತದೇಹಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *