ಹುಲಿ ಉಗುರು ಸಂಕಷ್ಟ…. ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ..!

ಸಮಗ್ರ ಸಮಾಚಾರ: ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲೆ ​ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಹಾಕಿಕೊಂಡು ಪೋಸ್​ ಕೊಟ್ಟವರೆಲ್ಲಾ ಇದೀಗ ಶಾಕ್​ ಆಗಿದ್ದಾರೆ. ನಟ ಜಗ್ಗೇಶ್ ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್‌ಲೈನ್‌ಗೆ ಸಂಕಷ್ಟ ಎದುರಾಗಿದೆ. ಸರ್ವ ಸಂಘಟನೆಗಳ ಒಕ್ಕೂಟ ನಟ ಜಗ್ಗೇಶ್, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದು, ದೂರಿನ ಹಿನ್ನೆಲೆ ಅರಣ್ಯಾಧಿಕಾರಿಗಳು ದರ್ಶನ್​ ಮನೆಗೆ ಭೇಟಿ ನೀಡಿದ್ದಾರೆ.

Ad Widget ... ..

ಬೆಂಗಳೂರಿನ ಆರ್​ ಆರ್​ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ. ಬೆಂಗಳೂರು ನಗರ ಆರ್​ ಎಫ್ ಸೇರಿದಂತೆ ಇಬ್ಬರು ಅಧಿಕಾರಿಗಳು ಆಗಮಿಸಿದ್ದಾರೆ. ದರ್ಶನ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರೋ ಬಗ್ಗೆ ದೂರು ಬಂದ ಹಿನ್ನೆಲೆ ವಿಚಾರಣೆ ನಡೆಸುತ್ತಿದ್ದಾರೆ. ಅರಣ್ಯಾಧಿಕಾರಿಗಳಿಅರಣ್ಯಾಧಿಕಾರಿಗಳು ಬಂದ ಹಿನ್ನೆಲೆ ಸ್ಥಳೀಯ ಪೊಲೀಸರು ಕೂಡ ದರ್ಶನ್ ಮನೆಗೆ ಆಗಮಿಸಿದ್ದಾರೆ.

Ad Widget

ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಹುಲಿ ಉಗುರು ಬಳಸೋದು ಅಪರಾಧವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಸ್ಪರ್ಧಿ ವರ್ತೂರ್​ ಸಂತೋಷ್​ ಅವರನ್ನು ಬಂಧಿಸಲಾಗಿದೆ. ದರ್ಶನ್ ಬಳಿಯೂ ಹುಲಿ ಉಗುರು ಇದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸಾಬೀತಾದ್ರೆ ದರ್ಶನ್ ಬಂಧನ ಕೂಡ ಗ್ಯಾರಂಟಿ ಎನ್ನುವ ಮಾತು ಕೇ

Leave a Comment

Your email address will not be published. Required fields are marked *