ಕೊಟ್ಟಿಗೆಹಾರ: ಲಾರಿ ಮುಖಾಮುಖಿ ಡಿಕ್ಕಿ| ಚಾಲಕರಿಗೆ ಗಂಭೀರ ಗಾಯ     

ಸಮಗ್ರ ನ್ಯೂಸ್: ಕೊಟ್ಟಿಗಾರ ಸುತ್ತಮುತ್ತ ಅ. 16ರಂದು ಮೂರು ಗಂಟೆಯಿಂದ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದಿಂದ ಕೊಟ್ಟಿಗೆಹಾರದ ಹೋಟೆಲ್ ದರ್ಬಾರ್ ಬಳಿ ಗ್ಯಾಸ್ ಲಾರಿ ಹಾಗೂ ಎಳನೀರು ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿದೆ. 

Ad Widget ... ..

ಮೂಡಿಗೆರೆ ಕಡೆಯಿಂದ ಎಳನೀರು ಲಾರಿ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿ ಎಳನೀರು ರಸ್ತೆಯ ಬದಿಗೆ ಬಿದ್ದಿವೆ. ಎರಡೂ ವಾಹನದ ಚಾಲಕರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Ad Widget

ಅಪಘಾತದಿಂದ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಣಕಲ್ ಪೊಲೀಸ್ ಹಾಗೂ ಸ್ಥಳೀಯರು ಮಳೆಯ ನಡುವೆಯೂ ಸುಗಮ ಸಂಚಾರಕ್ಕೆ ಹರ ಸಾಹಸ ಪಡಬೇಕಾಯಿತು.

Leave a Comment

Your email address will not be published. Required fields are marked *