‘ಭಾರತದಷ್ಟು ಸುರಕ್ಷಿತ ದೇಶ ಇನ್ನೊಂದಿಲ್ಲ’ | ಇಸ್ರೇಲ್‌ನಿಂದ ವಾಪಾಸ್ಸಾದ ಬಳಿಕ ನಟಿ ನುಶ್ರತ್ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಹಮಾಸ್​ನಿಂದ ದಾಳಿಗೊಳಗಾಗಿರುವ ಇಸ್ರೇಲ್​ನಲ್ಲಿ ಬಾಲಿವುಡ್ ನಟಿ ನುಶ್ರತ್ ಭರೂಚಾ ಸಿಕ್ಕಿಹಾಕಿಕೊಂಡಿದ್ದರು. ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್​​ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ ಏಕಾಏಕಿ ದಾಳಿ ನಡೆದಿದೆ. ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ.

Ad Widget ... ..

ಇದೀಗ ನಟಿ ಮಾಧ್ಯಮಗಳ ಎದುರು ಬಂದು ಸಾವಿನ ಬಾಯಿಗೆ ತಾವು ಹೋಗಿದ್ದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಅಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಮೀಪ ಗುಂಡಿನ ದಾಳಿಯಾಗಿತ್ತು, ಏನು ಆಗುತ್ತದೆಯೋ ತಿಳಿದುಬರಲಿಲ್ಲ. ಆ ಕ್ಷಣದಲ್ಲಿ ಸಾವೇ ಹತ್ತಿರ ಬಂದ ಹಾಗಿತ್ತು ಎಂದಿದ್ದಾರೆ .

Ad Widget

ಕೊನೆಗೂ ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ ಎಂದಿರುವ ನಟಿ, ಇಂಥ ಸುರಕ್ಷಿತ ಭಾರತದಲ್ಲಿ ನಾವಿರುವುದೇ ಪುಣ್ಯ ಎಂದಿದ್ದಾರೆ. ಇಲ್ಲಿ ನಾವು ಸಾಕಷ್ಟು ಸುರಕ್ಷಿತವಾಗಿದ್ದೇವೆ. ಇಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದಿರುವ ನಟಿ, ಭಾರತ ಸರ್ಕಾರ ಹಾಗೂ ಇಸ್ರೇಲ್​ನಲ್ಲಿರುವ ಭಾರತ ರಾಯಭಾರ ಕಚೇರಿಯು ಹೇಗೆ ಜನರ ರಕ್ಷಣೆ ಮಾಡುವಲ್ಲಿ ಕಾರ್ಯೋನ್ಮುಖವಾಗುತ್ತದೆ ಎಂದು ಬಣ್ಣಿಸಿದ್ದಾರೆ.

Leave a Comment

Your email address will not be published. Required fields are marked *