ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ

ಜಮ್ಮು-ಕಾಶ್ಮೀರ: ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಪೊಲೀಸ್ ವಿಶೇಷಾಧಿಕಾರಿ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿ ದಂಪತಿಯನ್ನು ಕೊಂದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅಧಿಕಾರಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ.

Ad Widget ... ..

ನಿನ್ನೆ ರಾತ್ರಿ 11 ಗಂಟೆಗೆ ಪುಲ್ವಾಮ ಜಿಲ್ಲೆಯ ಅವಂತಿಪೊರದ ಹರಿಪರಿಗಾಂವ್ ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ.

Ad Widget

ಪರಿಣಾಮ ಫಯಾಜ್ ಮತ್ತು ಅವರ ಪತ್ನಿ ರಾಜಾ ಬೇಗಂ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಪುತ್ರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳಿಂದ ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.

Leave a Comment

Your email address will not be published. Required fields are marked *