ಗಂಡ ಜೈಲಿನಲ್ಲಿದ್ದರೂ ಆರಾಮಾಗಿ ಸೀರೆ ಉಟ್ಟು ಪೋಸ್ ಕೊಟ್ಟ ನಟಿ

ಸಮಗ್ರ ನ್ಯೂಸ್: ನಟಿ ಮಹಾಲಕ್ಷ್ಮಿ ಮತ್ತು ರವೀಂದ್ರ ಚಂದ್ರಶೇಖರ್ ಜೋಡಿ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ತುಂಬಾ ವೈರಲ್ ಆದವರು ಇವರು, ಅದರೆ ಇದೀಗ ಪತಿ ರವೀಂದ್ರ ಚಂದ್ರಶೇಖರ್ ವಂಚನೆ ಆರೋಪದಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ.
ರವೀಂದರ್ ಚೆನ್ನೈ ಮೂಲದ ಉದ್ಯಮಿ ಬಾಲಾಜಿಗೆ 15 ಕೋಟಿ ಪಡೆದು ವಂಚಿಸಿದ್ದಾರೆ ಈ ಕಾರಣ ಅವರನ್ನು ಬಂಧಿಸಲಾಗಿದೆ‌ ಎಂದು ಅಧಿಕಾರಿಗಳು ಹೇಳಿದ್ದಾರೆ.

. Ad Widget . Ad Widget . Ad Widget

ಆದರೆ ಇಷ್ಟೆಲ್ಲ ನಡೆದರೂ ಈ ತಮಿಳು ಕಿರುತೆರೆ ನಟಿ ಗಂಡ ಜೈಲಿನಲ್ಲಿದ್ದರೂ ಆರಾಮವಾಗಿ ಹೊಸ ಸೀರೆ ಉಟ್ಟು ಪೋಸ್ ಕೊಡುತ್ತಿದ್ದಾರೆ. ಮಹಾಲಕ್ಷ್ಮಿ ಇತ್ತೀಚೆಗೆ ಸೀರೆ ಉಟ್ಟುಕೊಂಡು ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನೆಟ್ಟಿಗರು ಗಂಡ ಜೈಲಲ್ಲಿದ್ದರೂ ಶೋಕಿ ಬಿಟ್ಟಿಲ್ಲ ಎನ್ನುತ್ತಿದ್ದಾರೆ. ಮಹಾಲಕ್ಷ್ಮಿ ಅವರು ಕಪ್ಪು ಬಣ್ಣದ ಸೀರೆ ಉಟ್ಟು ಆಕ್ಸೈಡ್ ಜ್ಯುವೆಲ್ಲರಿಗಳನ್ನು ಧರಿಸಿ ಮುದ್ದಾಗಿ ಕಾಣಿಸಿದ್ದಾರೆ. ಆದರೆ ಗಂಡನ ಜೈಲಿನಿಂದ ಹೊರಗೆ ತರೋದು ಬಿಟ್ಟು ನೀವೇನು ಹೀಗೆ ಮಾಡ್ತಿದ್ದೀರಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಮಹಾಲಕ್ಷ್ಮಿ ಅವರ ಪತಿ ರವೀಂದರ್ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ವಿಚಾರದ ಜೊತೆ
ಮಹಾಲಕ್ಷ್ಮಿ ತನ್ನ ಪತಿ ರವೀಂದರ್ ಮೇಲೆ ಶಾಕಿಂಗ್ ಕಮೆಂಟ್ ಮಾಡಿರುವ ಸುದ್ದಿ ಇದೀಗ ಸಂಚಲನ ಮೂಡಿಸಿದೆ. ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾಗಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಅದರೆ ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ.

. Ad Widget .

Leave a Comment

Your email address will not be published. Required fields are marked *