ಸಮಗ್ರ ನ್ಯೂಸ್: ವಿಚಿತ್ರ ಬೀದಿ ಕಾಮುಕನನ್ನು (Amorous) ಹೈಗ್ರೌಂಡ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಂಬಿಎ ಓದುತ್ತಿದ್ದ ಅಂತಾರಾಜ್ಯದ ಯುವತಿಯೊಬ್ಬರು ವಸಂತ ನಗರ ಪಿಜಿಯಲ್ಲಿದ್ದು, ನಿತ್ಯ ಪಿಜಿಯಿಂದ ಕಾಲೇಜಿಗೆ ಹೋಗುವಾಗ, ಮುಂಜಾನೆ ವಾಕಿಂಗ್ ಹೋಗುವಾಗ ಆರೋಪಿಯು ಹಿಂಬಾಲಿಸಿಕೊಂಡು ಹೋಗಿ ಹಿಂಬದಿಗೆ ಹೊಡೆದು, ತಬ್ಬಿಕೊಂಡು ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ. ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಆರೋಪಿಯ ಕಿರುಕುಳ (Harassment) ತಾಳಲಾರದೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಮಾಡಿದಾಗ ಯುವತಿಗೆ ಕಿರುಕುಳ ಕೊಡುತ್ತಿದ್ದರ ಹಿಂದಿನ ಕಾರಣ ಬಹಿರಂಗವಾಗಿದೆ. ಯುವತಿಯನ್ನು ಪ್ರೀತಿ ಮಾಡುವ ಉದ್ದೇಶದಿಂದ ನಿತ್ಯ ಹಿಂದೆ ಹೋಗಿ ಇಂಪ್ರೆಸ್ ಮಾಡಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದೆ ಎಂದು ಆರೋಪಿ ಪೊಲೀಸರ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.