ಕೊಲ್ಲೂರು: ಮೇಯಲು ಬಿಟ್ಟ 4 ದನಗಳನ್ನು ಗುಂಡಿಕ್ಕಿ ಹತ್ಯೆ| ಆರೋಪಿ ವಿರುದ್ದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳನ್ನು ಹತ್ಯೆಗೈದು, 10-15 ದನಗಳಿಗೆ ಗಾಯಗೊಳಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಇಲ್ಲಿನ ಸಮೀಪದ ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡುವಿನ ಗುಲಾಬಿ ಎಂಬ ಮಹಿಳೆಯ ಹಾಗೂ ಇತರರ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆ.23ರಂದು ಕೋವಿಯಿಂದ ಶೂಟ್ ಮಾಡಿದ್ದು, ಇದರ ಪರಿಣಾಮ ಗಾಯಗೊಂಡ ದನಗಳು ಸಾವನಪ್ಪಿವೆ.

Ad Widget

ಇದನ್ನು ಪ್ರಶ್ನಿಸಿದ ಗುಲಾಬಿ ಅವರಿಗೆ ಆರೋಪಿ ಅವಾಚ್ಯವಾಗಿ ಬೈದು ಕೋವಿಯಿಂದ ಹೊಡೆದು ಶೂಟ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಸುಮಾರು ಒಂದು ತಿಂಗಳಿನಿಂದ ಅಂಗಡಿಜೆಡ್ಡು ಪರಿಸರದಲ್ಲಿ 3 ದನಗಳು ಸತ್ತಿದ್ದು, 10-15 ದನಗಳು ಗಾಯಗೊಂಡು ಹುಳವಾಗಿದೆ. ಇದಕ್ಕೆಲ್ಲಾ ನರಸಿಂಹ ಎಂಬಾತನೇ ಕಾರಣವಾಗಿದ್ದು, ಈತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನವನ್ನು ಕೊಂದ್ದಿದ್ದು 10-15 ದನಗಳಿಗೆ ಕೋವಿಯಿಂದ ಹೊಡೆದಿದ್ದೇನೆ. ಇನ್ನು ಮುಂದಕ್ಕೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *