ಸುಳ್ಯ: ಔಷಧ ತರಲು ತೆರಳಿದ ಯುವಕ ಹೃದಯಾಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಔಷಧ ತರಲು
ತೆರಳಿದ್ದ ಯುವಕ ದಾರಿ ಮಧ್ಯೆ ಹೃದಯಾಘಾತಕ್ಕೆ ಬಲಿಯಾದ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಸಂಭವಿಸಿದೆ.

Ad Widget ... ..

ಮಡಿಕೇರಿಯ ಚೆಂಬು ಗ್ರಾಮದ ಆನ್ಯಾಳ ನಿವಾಸಿಯಾಗಿರುವ ಚಂದ್ರಶೇಖ‌ (35)ಮೃತ ಯುವಕ. ಇವರು ಅನಾರೋಗ್ಯ ನಿಮಿತ್ತ ಔಷಧ ಪಡೆಯಲು ನಿಂತಿಕಲ್ಲಿಗೆ ಹೋಗಿದ್ದರು. ಔಷಧಿ ಪಡೆದು ಆಟೋದಲ್ಲಿ ವಾಪಸ್ ಮನೆಗೆ ಹಿಂದುರುಗುತ್ತಿದ್ದಾಗ ದಾರಿ ಮಧ್ಯೆ ಅಸ್ವಸ್ಥಗೊಂಡಿದ್ದಾರೆ.

Ad Widget

ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲು ಯತ್ನಿಸಿದರೂ ಅದಾಗಲೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *