ಮಹಿಳಾ ಮೀಸಲಾತಿ ಮಸೂದೆ/ ಇಂದು ರಾಜ್ಯಸಭೆಯಲ್ಲಿ ‌ಮಂಡನೆ

ಸಮಗ್ರ ನ್ಯೂಸ್: ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

Ad Widget ... ..

ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ‌ ಮೀಸಲಾತಿ ಮಸೂದೆ 454 ಮತಗಳೊಂದಿಗೆ ಅಂಗೀಕಾರಗೊಂಡಿತು. ಕೇವಲ ಎರಡು ಮತಗಳು ಮಸೂದೆಗೆ ವಿರುದ್ಧವಾಗಿತ್ತು.

Ad Widget

ಇಂದು ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಅಲ್ಲಿ ಅಂಗಿಕಾರಗೊಂಡಲ್ಲಿ ರಾಷ್ಟ್ರಪತಿಗಳ ಸಹಿಯೊಂದಿಗೆ ಜಾರಿಗೆ ಬರಲಿದೆ.

ಈ ಮಸೂದೆಯು ಮಹಿಳೆಯರಿಗೆ ಲೋಕಸಭೆಯಲ್ಲಿ 181 ಸ್ಥಾನಗಳನ್ನು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ 1370 ಸ್ಥಾನಗಳನ್ನು ಮೀಸಲಿಡುತ್ತದೆ.

Leave a Comment

Your email address will not be published. Required fields are marked *