ಕೊಡಗು: ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ!

ಸಮಗ್ರ ನ್ಯೂಸ್: ಕೊಲೆ ಮಾಡಿ ಬಳಿಕ ಶವವನ್ನು ಎಲ್ಲೋ ಎಸೆದು ಹೋಗುವಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಕೊಡುಗು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Ad Widget ... ..

ಕೊಡಗಿನ ವಿರಾಜಪೇಟೆ ಸಮೀಪದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 25ರಿಂದ 35 ವರ್ಷದ ಮಹಿಳೆಯ ಮೃತದೇಹ ಎಂದು ಪೊಲೀಸರು ಅಂದಾಜಿಸಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ತಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Ad Widget

ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 15 ದಿನಗಳ ಹಿಂದೆ ಕೊಲೆ ಆದಂತಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇದು ಕೊಡಗು-ಕೇರಳ ಗಡಿಭಾಗದ ಅರಣ್ಯ ಪ್ರದೇಶವಾಗಿದ್ದು, ಕೇರಳದ ಮಹಿಳೆ ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಎಸ್​ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *