ತಲಕಾವೇರಿಯಲ್ಲಿ ತಾಯಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ| ಯಾವಾಗ ಗೊತ್ತಾ ಮಾತೆ ದರ್ಶನ ಭಾಗ್ಯ?

ಸಮಗ್ರ ನ್ಯೂಸ್: ಕೊಡಗಿನ ಪ್ರಸಿದ್ಧ ಸ್ಥಳಗಳಲ್ಲಿ ತಲಕಾವೇರಿಯೂ ಒಂದಾಗಿದೆ. ಇಂತಹ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್.17ರಂದು ಮಧ್ಯರಾತ್ರಿ 1.27ಕ್ಕೆ ತಿರ್ಥೋದ್ಭವ ಆಗಲಿದೆ.

Ad Widget ... ..

ಈ ಬಗ್ಗೆ ಭಾಗಮಂಡಲದ ತಲಕಾವೇರಿ ದೇವಾಲಯ ಸಮಿತಿಯಿಂದ ಮಾಹಿತಿ ನೀಡಲಾಗಿದ್ದು, ತಲಕಾವೇರಿಯ ಕಾವೇರಿ ಉಗಮ ಸ್ಥಾನದಲ್ಲಿ ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಉಂಟಾಗಲಿದೆ ಎಂದು ಹೇಳಿದೆ.

Ad Widget

ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು ಇಲ್ಲಿ ನೀರು ಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ’ ಎನ್ನುವರು.

Leave a Comment

Your email address will not be published. Required fields are marked *