ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಸೇನೆ ಸೇರ ಬಯಸುವ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Ad Widget ... ..

ಅಸ್ಸಾಂ ರೆಜಿಮೆಂಟ್‍ನ ಹಿರಿಯ ಅಭಿಲೇಖಾಲಯ ಕಛೇರಿ ವತಿಯಿಂದ ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿಯನ್ನು ರಾಜ್ಯದಲ್ಲಿ ಆಯೋಜಿಸಲಾಗುತ್ತಿದೆ. ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು ಆನ್‍ಲೈನ್ ನಲ್ಲಿ ಅರ್ಜಿಯನ್ನು ಜು. 20 ರ ಒಳಗೆ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.joinindianarmy.nic.in ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *