Ad Widget .

ಸುಳ್ಯ:ನವೋದಯ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ

ಸಮಗ್ರ ನ್ಯೂಸ್: ಸೆ 8ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಸುಳ್ಯ ತಾಲೂಕು ನವೋದಯ ಸ್ವ-ಸಹಾಯ ಸಂಘಗಳ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಪರಿಶೀಲನಾ ಸಭೆಯನ್ನು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ನಡೆಸಿ ನವೋದಯ ಗುಂಪುಗಳ ಗುಣಮಟ್ಟ ಕಾಯ್ದುಕೊಂಡು ಗುಂಪುಗಳನ್ನು ಪರಿಣಾಮಕಾರಿಯಾಗಿ ಪ್ರೇರಕರು ಉತ್ತಮ ಸೇವೆಯ ಮೂಲಕ ನಿರ್ವಹಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

Ad Widget . Ad Widget . Ad Widget .

ಈ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನ ಸ್ವ-ಸಹಾಯ ಸಂಘಗಳ ನೋಡಲ್ ಅಧಿಕಾರಿ ಪದ್ಮನಾಭ ಇವರು ಡಿಸಿಸಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಕನಿಷ್ಟ ನಿಯಮಗಳೊಂದಿಗೆ ನವೋದಯ ಗುಂಪುಗಳಿಗೆ ಸುಲಭ ಸಾಲ ಸೌಲಭ್ಯ ಮತ್ತು ಮರುಪಾವತಿಯ ಪ್ರಾಮುಖ್ಯತೆಯಲ್ಲಿ ಪ್ರೇರಕರ ಜವಾಬ್ದಾರಿ ಬಗ್ಗೆ ತಿಳಿಸಿದರು.

ಡಿಸಿಸಿ ಬ್ಯಾಂಕ್ ನ ಸ್ವ-ಸಹಾಯ ಗುಂಪು ದಳದ ಜಿಲ್ಲಾ ಮೇಲ್ವಿಚಾರಕರಾದ ರಂಜಿತ್ ಕುಮಾರ್ ಇವರು ಮಾಹಿತಿ ನೀಡಿ ಸಾಲದ ಅರ್ಜಿ ತಯಾರಿಕೆ ಗುಂಪುಗಳ ಪುಸ್ತಕದ ಸಮರ್ಪಕ ಪರಿಶೀಲನೆ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಚೈತನ್ಯ ವಿಮಾ ಚೆಕ್ ಹಸ್ತಾಂತರ:
ಸುಳ್ಯ ತಾಲೂಕು ಪ್ರೇರಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತರಾದ ಸುಳ್ಯ ತಾಲೂಕು ಬಳ್ಪ ಗ್ರಾಮದ ನವಶಕ್ತಿ ನವೋದಯ ಸ್ವ-ಸಹಾಯ ಗುಂಪು ಕುಂಜತ್ತಾಡಿ ಇದರ ಸದಸ್ಯ ದಿ. ದಾಮೋದರ ಇವರ ಅವಲಂಬಿತ ಕುಟುಂಬಕ್ಕೆ ಮತ್ತು ಬೈಕ್ ಅಪಘಾತದಲ್ಲಿ ಮೃತರಾದ ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಮೂಕಾಂಬಿಕಾ ನವೋದಯ ಸ್ವಸಹಾಯ ಗುಂಪಿನ ಸದಸ್ಯ ದಿ.ಚಂದ್ರಶೇಖರ ನಂಗಾರ್ ಇವರ ಕುಟುಂಬಕ್ಕೆ ಚೈತನ್ಯ ಸ್ವಸಹಾಯ ಆರೋಗ್ಯ ಯೋಜನೆಯಲ್ಲಿ ಮಂಜೂರಾದ ತಲಾ ರೂ 1ಲಕ್ಷದ ಚೆಕ್ ಅನ್ನು ಅವಲಂಬಿತ ಕುಟುಂಬಕ್ಕೆ ನೀಡಲು ವಲಯ ಪ್ರೇರಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನವೋದಯ ಟ್ರಸ್ಟ್ ನ ಸಿಬ್ಬಂದಿ ಶ್ರೀಲತಾ, ಸುಳ್ಯ ತಾಲೂಕು ನವೋದಯ ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ಧು ಉಪಸ್ಥಿತ ರಿದ್ದರು.

Leave a Comment

Your email address will not be published. Required fields are marked *