ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ

ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ.

Ad Widget ... ..

ಹುಚ್ಚಪ್ಪ (35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

Ad Widget

ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *