ರಕ್ಷಾಬಂಧನ ದಿನದಂದೇ ಪ್ರೀತಿಯ ಸಹೋದರ ಹೃದಯಾಘಾತದಿಂದ ಸಾವು| ಕಣ್ಣೀರಿಡುತ್ತಲೇ ರಾಖಿ ಕಟ್ಟಿದ ತಂಗಿ

ಸಮಗ್ರ ನ್ಯೂಸ್: ರಕ್ಷಾ ಬಂಧನ ದಿನದಂದೇ ತನ್ನ ಪ್ರೀತಿಯ ಅಣ್ಣ ತೀವ್ರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರಿ ಕಣ್ಣೀರಿಡುತ್ತಲೇ ಕೊನೆಯ ಬಾರಿಗೆ ರಾಖಿ ಕಟ್ಟಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

Ad Widget ... ..

ಬುಧವಾರ ದೇಶದಾದ್ಯಂತ ರಕ್ಷಾಬಂಧನ ದಿನವನ್ನು ಭರ್ಜರಿಯಾಗಿ ಆಚರಿಸಲಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ್ದಾರೆ. ಇದರ ಮಧ್ಯೆ ತೆಲಂಗಾಣದಲ್ಲಿ ಇದೇ ದಿನದಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೆಟ್ಟಿಗರ ಕಣ್ಣಂಚನ್ನು ತೇವಗೊಳಿಸಿದೆ.

Ad Widget

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆ ಸಹೋದರಿಯ ನೋವಿನ ಕ್ಷಣಕ್ಕೆ ಮನ ಮಿಡಿದಿದ್ದಾರೆ. ಅಲ್ಲದೆ ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave a Comment

Your email address will not be published. Required fields are marked *