ಮಡಿಕೇರಿ: ಕೆ.ಎಸ್.ಅರ್.ಟಿ.ಸಿ. ಡಿಪೋ ಮ್ಯಾನೇಜರ್ ಕಿರುಕುಳ| ಡೆತ್ ನೋಟ್ ಬರೆದಿಟ್ಟು ಕಿರಿಯ ಸಹಾಯಕ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಮಡಿಕೇರಿ KSRTC ಡಿಪೋ ಮ್ಯಾನೇಜರ್ ಕಿರುಕುಳ ತಾಳಲಾರದೆ ಕಿರಿಯ ಸಹಾಯಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆ. 29 ರಂದು ವರದಿಯಾಗಿದೆ.

Ad Widget ... ..

ಮಡಿಕೇರಿ ಡಿಪೋದ ಕಿರಿಯ ಸಹಾಯಕ ಅಭಿಷೇಕ್ ಎಂಬವರು ಅಲ್ಲಿನ ವ್ಯವಸ್ಥಾಪಕಿ ಗೀತಾ ಅವರಿಂದ ಅನುಭವಿಸುತ್ತಿರುವ ಮಾನಸಿಕ ಕಿರುಕುಳವನ್ನು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Ad Widget

ಇದೀಗ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಅವರಿಂದ ಹೇಳಿಕೆ ಪಡೆದುಕೊಂಡಿದ್ದು, ಮಾನಸಿಕ ಕಿರುಕುಳವೆ ನನ್ನ ಈ ಪ್ರಯತ್ನಕ್ಕೆ ಕಾರಣ ಎಂದು ಸ್ಪಷ್ಟ ಪಡಿಸಿದ್ದಾರೆ.

Leave a Comment

Your email address will not be published. Required fields are marked *