ಚಿಕ್ಕಮಗಳೂರು : ಕಾರು-ಬೈಕ್ ನಡುವೆ ಭೀಕರ ಅಪಘಾತ|ಕಾರ್ ಚಾಲಕ ಪರಾರಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ.

Ad Widget ... ..

ಅರಸೀಕೆರೆ ತಾಲೂಕಿನ ಮಾವುತನಹಳ್ಳಿ ಗ್ರಾಮದ ಕಲ್ಲಮ್ಮ (60) ಸಾವನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಕಾರಿನಲ್ಲಿ ಸಿಲುಕಿಕೊಂಡಿದೆ. ಬಳಿಕ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

Ad Widget

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚೌಡಯ್ಯ ಎಂಬುವರಿಗೆ ಈ ಕಾರು ಸೇರಿದ್ದು, ಇವರು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಆಪ್ತ ಎಂಬುದು ತಿಳಿದಿದೆ. ಈ ಘಟನೆಯ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *