ಸುಬ್ರಹ್ಮಣ್ಯ:ಟವರ್ ನಿರ್ಮಾಣದ ಆಮೀಷವೊಡ್ಡಿ ವಂಚನೆ ಆರೋಪ

ಸಮಗ್ರ ನ್ಯೂಸ್: ಖಾಸಗಿ ಕಂಪೆನಿಯ ಟವರ್ ನಿರ್ಮಿಸಲು ಸ್ವಂತ ಜಾಗದಲ್ಲಿ ಅವಕಾಶ ನೀಡುವಂತೆ ಕೋರಿ ವಂಚಿಸಲಾದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಐವತ್ತೊಕ್ಲು ಗ್ರಾಮದ ನಾರಾಯಣ ಎನ್. ಎಂಬವರಿಗೆ ಖಾಸಗಿ ಕಂಪೆನಿಯವರೆಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿರುವ ಅಪರಿಚಿತರು ಟವರ್ ನಿರ್ಮಾಣಕ್ಕೆ ಸ್ವಂತ ಜಾಗದಲ್ಲಿ ಸ್ಥಳಾವಕಾಶ ಕೋರಿದ್ದು, ಈ ಬಗ್ಗೆ ನಾರಾಯಣ ಅವರಿಂದ ದಾಖಲೆಯನ್ನು ವಾಟ್ಸಪ್ ಮೂಲಕ ಪಡೆದಿದ್ದಾರೆ. ಆ. 12 ಮತ್ತು ಆ.14ರ ಅವಧಿಯಲ್ಲಿ ಒಟ್ಟು 52 ಸಾವಿರ ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *