ಸೌಜನ್ಯ ಕುಟುಂಬ ಹಾಗೂ ಮಹೇಶ್ ಶೆಟ್ಟಿ ಮನೆಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್| ಹೋರಾಟ ಇನ್ನಷ್ಟು ಪ್ರಬಲ ಸಾಧ್ಯತೆ

ಸಮಗ್ರ ನ್ಯೂಸ್: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಇಂದು (ಆ.12) ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಧರ್ಮಸ್ಥಳ ಸಮೀಪ ಪಾಂಗಾಳದ ಸೌಜನ್ಯ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿದ್ದಾರೆ.

Ad Widget ... ..

ಸೌಜನ್ಯ ಪ್ರಕರಣದ ಈವರೆಗಿನ ಹೋರಾಟದ ಬಗ್ಗೆ ಜೊತೆಗೆ , ಮುಂದೆ ಯಾವ ರೀತಿಯಾಗಿ ಹೋರಾಟ ನಡೆಯಲಿದೆ ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ ಈ ನ್ಯಾಯದ ಹೋರಾಟಕ್ಕೆ ಪ್ರಮೋದ್ ಮುತಾಲಿಕ್ ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

Ad Widget

ಇಬ್ಬರೂ ಘಟಾನುಘಟಿ ನಾಯಕರ ಮಾತುಕತೆ ಬಳಿಕ ಸೌಜನ್ಯ ಪ್ರಕರಣದ ಹೋರಾಟ ಇನ್ನಷ್ಟು ಕಾವು ಪಡೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿದೆ.

Leave a Comment

Your email address will not be published. Required fields are marked *