ಸುಳ್ಯ: ಭುಗಿಲೆದ್ದ ಅಸಮಾಧಾನ| ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಹಾಜರಾಗದ ಸ್ವಪಕ್ಷೀಯ ಸದಸ್ಯರು!?

ಸಮಗ್ರ ಸುದ್ದಿ: ಪಂಚಾಯತ್ ನ ಸದಸ್ಯರ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಹಾಜರಾಗದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾ.ಪಂ ನಲ್ಲಿ ನಡೆದಿದೆ.

Ad Widget ... ..

ಗುತ್ತಿಗಾರು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಬಿ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿಗೆ ಮೀಸಲಾತಿ ನಿಗದಿಯಾಗಿ ಇಂದು(ಆ.10) ಚುನಾವಣೆ ನಡೆದಿದೆ.

Ad Widget

ಆದರೆ ಪಕ್ಷದೊಳಗಿನ ಅಸಮಾಧಾನದಿಂದ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಒಂದನೇ ವಾರ್ಡ್ ನ ನಾಲ್ಕೂ ಸದಸ್ಯರು ಗೈರಾಗಿದ್ದರು. ಇನ್ನು ಹಾಜರಾದ ಸದಸ್ಯರಲ್ಲಿ ಉಪಾಧ್ಯಕ್ಷರ ಆಯ್ಕೆಗೆ ಮೂರು ಮಂದಿ ಮತ ಚಲಾಯಿಸಲಿಲ್ಲ ಎಂಬುದಾಗಿಯೂ ತಿಳಿದುಬಂದಿದೆ.

ಸದ್ಯ ಅಧ್ಯಕ್ಷರಾಗಿ ಸುಮಿತ್ರ ಮೂಕಮಲೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸಾಲ್ತಾಡಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಮ ಭಾರತ ತಂಡದಿಂದ ಕ್ರಮವಾಗಿ ಲತಾಕುಮಾರಿ ಹಾಗೂ ವಸಂತ ಮೊಗ್ರ ಸ್ಪರ್ಧಿಸಿದ್ದರು.

Leave a Comment

Your email address will not be published. Required fields are marked *