ಸುಳ್ಯ:ಎನ್ಎಂಸಿಯಲ್ಲಿ ಸುಳ್ಯದ ಶಿಕ್ಷಣ ಕ್ರಾಂತಿಯ ಹರಿಕಾರ ಡಾ.ಕುರುಂಜಿ ವೆಂಕಟರಮಣ ಗೌಡರ ಹತ್ತನೇ ವರ್ಷದ ಪುಣ್ಯಸ್ಮರಣೆ| ಕೆವಿಜಿ ಅವರ ಭಾವಚಿತ್ರಕ್ಕೆ ಕಾಲೇಜಿನ ಸಿಬ್ಬಂದಿಗಳಿಂದ ಪುಷ್ಪಾರ್ಚನೆ

ಸಮಗ್ರ ನ್ಯೂಸ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ
ಸುಳ್ಯದ ಆಧುನಿಕ ಶಿಲ್ಪಿ, ಶಿಕ್ಷಣ ಕ್ರಾಂತಿಯ ಹರಿಕಾರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಸ್ಥಾಪಕಾಧ್ಯಕ್ಷ ದಿ. ಡಾ.ಕುರುಂಜಿ ವೆಂಕಟರಮಣ ಗೌಡರ ಹತ್ತನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಚರಿಸಲಾಯಿತು.

Ad Widget ... ..

ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ. ಕೆವಿಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆದರ್ಶ ಹಾಗೂ ಶಿಕ್ಷಣ ಸಂಸ್ಥೆಗಳನ್ನು ರೂಪಿಸಿದ ಬಗೆಯನ್ನು ಶ್ಲಾಘಿಸಿದರು.

Ad Widget

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ., ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಹಾಗೂ ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ದಿ|ಕೆವಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Leave a Comment

Your email address will not be published. Required fields are marked *