ಹವಾಮಾನ ವರದಿ| ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆಯಾಗಲಿದೆ ಹಾಗೆಯೇ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಕೊಡಗು, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

Ad Widget ... ..

ರಾಜ್ಯಾದ್ಯಂತ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಭಾನುವಾರ ನಗರದ ಹಲವೆಡೆ ಮಳೆಯಾಗಿದೆ, ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ.

Ad Widget

ಉಡುಪಿ ಜಿಲ್ಲೆಯ ನಾಡ್ಪಾಲಿನಲ್ಲಿ 94 ಮಿ.ಮೀ. ಮಳೆಯಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಪ್ರಮಾಣವಾಗಿದೆ. ಕಾರ್ಕಳದ ಮಾಳದಲ್ಲಿ 80.5 ಮಿ.ಮೀ, ಕುಂದಾಪುರದ ಮಡಾಮಕ್ಕಿಯಲ್ಲಿ 75 ಮಿ.ಮೀ, ಕಾರ್ಕಳದ ಮುದ್ರಾಡಿಯಲ್ಲಿ 57 ಮಿ.ಮೀ ಮಳೆಯಾಗಿದೆ. ಕಾರ್ಕಳದ ಕುಚ್ಚೂರಿನಲ್ಲಿ 39.5, ಕುಂದಾಪುರದ ಕೆರ್ಗಾಲು 35.5, ಅಂಪಾರಿನಲ್ಲಿ 34, ಬೆಳ್ವೆಯಲ್ಲಿ 33.5, ಕರ್ಕುಂಜೆಯಲ್ಲಿ 32.5, ಶಿವಪುರದಲ್ಲಿ 32 ಮಿ.ಮೀ. ಮಳೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕೊಂಬಾರಿನಲ್ಲಿ 50 ಮಿ.ಮೀ, ಬೆಳ್ತಂಗಡಿಯ ಇಳಂತಿಲದಲ್ಲಿ 49, ಅರಂತೋಡಿನಲ್ಲಿ 49 ಮಿ.ಮೀ. ಮಳೆಯಾಗಿದೆ.

Leave a Comment

Your email address will not be published. Required fields are marked *