ಕೊಲ್ಲಮೊಗ್ರು:ಹಣ ದುಪ್ಪಟ್ಟುಗೊಳಿಸುವ ವಂಚನಾ ಜಾಲಕ್ಕೆ ಸಿಲುಕಿ 34 ಸಾವಿರ ಕಳೆದುಕೊಂಡ ಯುವಕ

ಸಮಗ್ರ ನ್ಯೂಸ್: ಹಣ ದುಪ್ಪಟ್ಟುಗೊಳಿಸುವ ವಂಚನಾ ಜಾಲಕ್ಕೆ ಸಿಲುಕಿ ಯುವಕನೋರ್ವ 34 ಸಾವಿರ ಕಳೆದುಕೊಂಡ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget ... ..

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಪೂಜಾರಿ ಮನೆ ಲಿಖಿನ್ ಪಿ.ಟಿ. ಎಂಬ ಯುವಕ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜು. 17ರಂದು ಲಿಖಿನ್ ಅವರ ವಾಟ್ಸ್ ಪ್ ಗೆ ಹಣ ದ್ವಿಗುಣಗೊಳಿಸಿ ಕೊಡುತ್ತೇನೆಂದು ಮೆಸೇಜ್ ಬಂದಿದ್ದು, ಅದೇ ದಿನ ಅವರು ತಮ್ಮ ನಂಬರ್ ನಿಂದ ಆರೋಪಿ ಮೊಬೈಲ್ ನಂಬರ್ ಗೆ 5000 ರೂಗಳನ್ನು ಕಳುಹಿಸಿದ್ದು, ಮರುದಿನ ಬೆಳಿಗ್ಗೆ ದ್ವಿಗುಣಗೊಳಿಸಿದ ಹಣವನ್ನು ಕೇಳಿದ್ದಾರೆ. ಈ ವೇಳೆ ಬ್ಯಾಂಕ್ ಚಾರ್ಜ್ ಎಂದು 2000 ರೂ., GST ಚಾರ್ಜ್ 3500 ರೂ. ಕಮಿಷನ್ ಚಾರ್ಜ್ ಎಂದು 4000 ರೂ.ಗಳನ್ನು ಆರೋಪಿ ಪಡೆದಿದ್ದಾರೆ.

Ad Widget

ಆರೋಪಿ ಮತ್ತೆ 13000 ರೂಗಳನ್ನು ಕಳುಹಿಸಿ ಇಲ್ಲದಿದ್ದರೇ ನಿನ್ನ ಹಣವನ್ನು ವಾಪಸ್ ಕೊಡುವುದಿಲ್ಲವೆಂದು ಮತ್ತೆ ಬೇಡಿಕೆ ಇರಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡುತ್ತೇನೆಂದು ತಿಳಿಸಿದ್ದಾರೆ. ಅದರಂತೆ ಯುವಕ ಮತ್ತೆ 13,000 ರೂಗಳನ್ನು ಕಳುಹಿಸಿದ್ದು, ಒಟ್ಟು 34,500 ರೂಗಳನ್ನು ಆರೋಪಿಯ ಬೇರೆ ಬೇರೆ ನಂಬರ್ ಗಳಿಗೆ ಯುವಕ ಕಳುಹಿಸಿದ್ದಾರೆ.

ವಂಚನೆಗೊಳಗಾದ ಬಗ್ಗೆ ಯುವಕ ಮತ್ತೆ ಆರೋಪಿಗೆ ಕರೆ ಮಾಡಿದಾಗ ಇನ್ನು ಹೆಚ್ಚು ಹಣವನ್ನು ಕಳುಹಿಸುವಂತೆ ಜಮಾಯಿಸಿದ್ದು, ಇಲ್ಲದಿದ್ದರೆ ನೀನು ಪಾವತಿಸಿದ ಹಣ ಮರಳಿಸುವುದಿಲ್ಲವೆಂದು ಹೇಳಿದ್ದಾನೆ. ಈ ಬಗ್ಗೆ ಯುವಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *