ಸಮಗ್ರ ನ್ಯೂಸ್: ಮಗುಯೊಂದು ರಾತ್ರಿ ವೇಳೆ ಮನೆಯಿಂದ ಎದ್ದು ರಸ್ತೆಯಲ್ಲಿ ನಡೆದುಕೊಂಡು ಹೋದ ಘಟನೆ ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಜು.19ರ ರಾತ್ರಿ 3 ಗಂಟೆಗೆ ನಡೆದಿದೆ.
ಪುಟ್ಟ ಬಾಲಕಿಯೊಬ್ಬಳು ನಿದ್ದೆ ಕಣ್ಣಿನಲ್ಲಿ ಮನೆಯಿಂದ ಎದ್ದು ರಸ್ತೆಯವರೆಗೆ ನಡೆದುಕೊಂಡು ಬಂದಿದ್ದಾಳೆ. ರಾತ್ರಿ 3 ಗಂಟೆಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದರು. ಬಳಿಕ ಮಗುವನ್ನು ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದೆ. ಬಳಿಕ ಮಗುವನ್ನು ವಿಶ್ವ ಅವರು ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದಾರೆ.
ಮಗು ಕೊರಗಜ್ಜ ಗುಡಿಯ ನಾಮಫಲಕದ ಹತ್ತಿರ ಬಂದು ನಿಂತಿದ್ದು, ಕೊರಗಜ್ಜನೇ ಮಗುವನ್ನು ಮುಂದೆ ಹೋಗದಂತೆ ತಡೆದಿದ್ದಾನೆ ಎಂದು ಭಕ್ತರ ನಂಬಿಕೆಯಾಗಿದ್ದು, ಇದು ಕೊರಗಜ್ಜನ ಪವಾಡ ಎಂದು ಹೇಳುತ್ತಿದ್ದಾರೆ.