ಬೆಳ್ತಂಗಡಿ: ಜಾಗದ ತಕರಾರು ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟು ಅಂತ್ಯ..!

ಸಮಗ್ರ ನ್ಯೂಸ್: ಪವಾಡವಿರುವ ಕೊರಗಜ್ಜನ ಗುಡಿಗೇ ವ್ಯಕ್ತಿಯೊಬ್ಬ ಬೆಂಕಿ ಇಟ್ಟ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ನಡೆದಿದೆ.

Ad Widget ... ..

ಬಾಡಾರಿನ ಕೊರಗಕಲ್ಲು ಎಂಬಲ್ಲಿ ಭೂ ವಿಚಾರಕ್ಕೆ ನಡೆದ ಗಲಾಟೆ ಪವಾಡಪುರುಷನ ಸನ್ನಿಧಿಗೇ ಬೆಂಕಿ ಇಡುವ ಮೂಲಕ ಅಂತ್ಯವಾಗಿದೆ.

Ad Widget

ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಈ ಸಂಬಂಧ ಸಮಿತಿ ಮತ್ತು ಖಾಸಗಿ ವ್ಯಕ್ತಿ ನಡುವೆ ತಗಾದೆ ಏರ್ಪಟ್ಟಿತ್ತು. ಈಗ ಸ್ಥಳೀಯ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ. ಘಟನೆ ಖಂಡಿಸಿ ಸ್ವಾಮಿ ಕೊರಗಜ್ಜ ಸಮಿತಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದೆ.

Leave a Comment

Your email address will not be published. Required fields are marked *