ಚೆಕ್ ಬೌನ್ಸ್ ಪ್ರಕರಣ | ನಟ ನೀನಾಸಂ ಅಶ್ವತ್ಥ್ ಅರೆಸ್ಟ್

ಸಮಗ್ರ ನ್ಯೂಸ್: ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಪೋಷಕ ನಟ ನೀನಾಸಂ ಅಶ್ವತ್ಥ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಹಾಸನದ ಬಡಾವಣೆ ಠಾಣಾ ಪೊಲೀಸರು ಅಶ್ವತ್ಥ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

Ad Widget ... ..

ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ನಟ ಶೇ. 25% ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇನ್ನುಳಿದ ಹಣ ಪಾವತಿಸಲು ಸಮಯಾವಕಾಶವನ್ನು ಅಶ್ವತ್ಥ್ ಕೇಳಿಕೊಂಡಿದ್ದಾರೆ.

Ad Widget

ಹಾಸನದ ರೋಹಿತ್ ಎಂಬವರಿಂದ ಅಶ್ವತ್ಥ್ ಹಸು ಖರೀದಿ ಮಾಡಿದ್ದರು. ಇದಕ್ಕಾಗಿ 1.5 ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿದ್ದಕ್ಕೆ ರೋಹಿತ್ ಅವರು ನಟನ ವಿರುದ್ಧ ಜೆಎಂಎಫ್‍ಸಿ ಕೋರ್ಟ್ ಮೊರೆ ಹೋಗಿದ್ದರು. ಹಲವು ಬಾರಿ ವಿಚಾರಣೆಗೆ ಗೈರಾಗಿದ್ದ ಅಶ್ವತ್ಥ್ ಕೊನೆಗೆ ಅರೆಸ್ಟ್ ವಾರೆಂಟ್ ಜಾರಿಯಾದ ನಂತರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

Leave a Comment

Your email address will not be published. Required fields are marked *