ಮಂಗಳೂರು:ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಅಪಘಾತ| ಕಡಬದ ಯುವಕ ದಾರುಣ ಸಾವು

ಸಮಗ್ರ ನ್ಯೂಸ್: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಕಡಬ ತಾಲೂಕಿನ ಇಚಿಲಂಪಾಡಿಯ ಯುವಕ ಮೃತಪಟ್ಟ ಘಟನೆ ಮಂಗಳೂರಿನ ಪಂಪ್ ವೆಲ್ ನಲ್ಲಿ ಬುಧವಾರದಂದು ಬೆಳ್ಳಂಬೆಳಗ್ಗೆ ನಡೆದಿದೆ.

Ad Widget ... ..

ಮೃತ ಸವಾರನನ್ನು ಇಚ್ಲಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ಓಮನ ದಂಪತಿ ಪುತ್ರ ಸಂದೇಶ್ (25) ಎಂದು ಗುರುತಿಸಲಾಗಿದೆ. ಈತ ಬೆಂದೂರ್ ವೆಲ್ ನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ರೂಮ್ ಗೆ ತೆರಳುತ್ತಿದ್ದ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ಸಂಭವಿಸಿದೆ.

Ad Widget

ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತರು ಇಬ್ಬರು ಸಹೋದರರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *