ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಲವ್‌ ಸ್ಟೋರಿ|ಲವ್ ಜಿಹಾದ್‌ನಿಂದ ಯುವತಿ ಬಚಾವ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲೂ ಲವ್ ಜಿಹಾದ್ ಗಾಳಿ ಬೀಸಿದ್ದು, ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ಎರಡು ವರ್ಷದ ಬಳಿಕ ಆತನ ಬಣ್ಣ ಬಯಲಾಗಿದ್ದು, ಯುವತಿ ಲವ್ ಜಿಹಾದ್ ಗೆ ಸಿಲುಕುವ ಮುನ್ನವೆ ಯುವತಿ ಪಾರಾಗಿದ್ದಾಳೆ.

Ad Widget ... ..

ಇಂತದೊಂದು ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ,ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಯುವತಿಯನ್ನ ವಂಚಿಸಿದ್ದಾನೆ. ಇವರಿಬ್ಬರು ನಗರದ ಗಾರ್ಮೆಂಟ್ ರಿಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನು ನನ್ನ ಹೆಸರು ಮೆಲ್ಬಿನ್ ಹೇಳಿ ಪರಿಚಯ ಮಾಡಿಕೊಂಡು, ಯುವತಿಯನ್ನ ಬಲೆಗೆ ಬೀಳಿಸಿದ್ದಾನೆ. ಅವನ ಮಾತು ನಂಬಿದ ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿ, ಒಡನಾಟದಲ್ಲಿದ್ದಾಳೆ. ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಯುವಕನ ಪರ್ಸ್ ನೋಡಿದಾಗ ಆಧಾರ್‌ಕಾರ್ಡ್ ಸಿಕ್ಕಿದ್ದು, ಅನ್ಯ ಕೋಮಿನವನು ಎಂಬು ಗೊತ್ತಾಗಿದೆ. ನಂತರ ಯುವಕ ಮುಸ್ಲಿಂ ಎಂದು ತಿಳಿದರೆ ಯುವತಿಯರು ಸ್ನೇಹ ಬೆಳೆಸುವುದಿಲ್ಲ ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.

Ad Widget

ಅನ್ಯ ಕೋಮಿನವನು ಎಂದು ತಿಳಿದ ಬಳಿಕ ಮದುವೆ ಸಾಧ್ಯವಿಲ್ಲ ಎಂದು ಯುವತಿ ಆತನ ಪ್ರೀತಿಯನ್ನ ತಿರಸ್ಕಾರ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಯುವತಿ ಮತ್ತು ಕುಟುಂಬದವರನ್ನ ಮುಗಿಸುವ ಬೆದರಿಕೆ ಹಾಕಿದ್ದಾನೆ.
ಇನ್ನೂ ತನ್ನ ಧರ್ಮ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಗೆ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಲ್ಲದೇ, ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣವನ್ನೂ ಸುಲಿಗೆ ಮಾಡಿದ್ದಾನೆ. ಇದೇ ರೀತಿ ಈ ಹಿಂದೆಯೂ ಸಹ ಸಾಕಷ್ಟು ಯುವತಿಯರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರ ಬಳಿ ಇಲ್ಲಸಲ್ಲದ ಆರೋಪ ಮಾಡಿ ಕೆಲಸ ಮಾಡುತ್ತಿದ್ದ ಯುವತಿಗೆ ಗೇಟ್ ಪಾಸ್ ಕೊಡಿಸಿದ್ದಾನೆ ಎನ್ನುವ ಆರೋಪಗಳೂ ಹೇಳಿಬಂದಿವೆ.

ಕೊನೆಗೆ ಪ್ರೀತಿಯ ಹೆಸರಿನಲ್ಲಿ ಯುವತಿ ವಂಚನೆ ಮತ್ತು ಅನ್ಯಾಯಕ್ಕೊಳಗಾಗಿದ್ದು, ಪ್ರಾಣ ರಕ್ಷಣೆ ಮತ್ತು ನ್ಯಾಯಕ್ಕಾಗಿ ಹೆಬ್ಬಗೋಡಿ ಠಾಣೆಯಲ್ಲಿ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾನ ವಿರುದ್ಧ ಯುವತಿ ದೂರು ದಾಖಲಿಸಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ. ಒಟ್ಟಿನಲ್ಲಿ ಅಲ್ ಮೆಹಪ್ಯೂಸ್ ಬರಪೂಯಾನ ಕ್ರಿಶ್ಚಿಯನ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನ ಬಲೆಗೆ ಬಿಳಿಸಿರುವುದರಿಂದ ಲವ್ ಜಿಹಾದ್ ಎಂದು ಶಂಕಿಸಿ ಯುವತಿ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾಳೆ.

Leave a Comment

Your email address will not be published. Required fields are marked *