ಇಂದಿರಾ ಕ್ಯಾಂಟೀನ್ ನಲ್ಲಿ ಅಡುಗೆಗೆ ನೀರು ಸರಬರಾಜು ಮಾಡದ ಮಡಿಕೇರಿ ನಗರಸಭೆ

ಸಮಗ್ರ ನ್ಯೂಸ್:‌ ಮಡಿಕೇರಿ ನಗರದ ಇಂದಿರಾ ಕ್ಯಾಂಟೀನ್ ಗೆ ಜೂ.7ರಂದು ಮಧ್ಯಾಹ್ನ ಸಮಯದಲ್ಲಿ ಊಟಕ್ಕೆ ಹೋದವರಿಗೆ ನಿರಾಸೆಯಾದ ಘಟನೆ ನಡೆದಿದೆ.

Ad Widget ... ..

ಇಲ್ಲಿಯ ಇಂದಿರಾ ಕ್ಯಾಂಟೀನ್ ಗೆ ಬಡವರು ಹಾಗೂ ಕೂಲಿ ಕಾರ್ಮಿಕರು ಊಟಕ್ಕೆ ಬರುತ್ತಿದರು ಆದರೆ ಅವರಿಗೆ ಇಂದು ಊಟವಿಲ್ಲದೆ ಹಾಗೆ ಹಿಂದಿರುಗಿದರು. ಕಾರಣ ಕೇಳಿದರೆ ಇಂದು ಕರೆಂಟ್ ಇಲ್ಲ ಕುಡಿಯಲು ಹಾಗೂ ಅಡುಗೆಗೆ ನೀರಿಲ್ಲ ಎಂಬ ಉತ್ತರ ನೀಡಿದ್ದಾರೆ. ಈ ಬಗ್ಗೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಅವರು ಬಡವರ ಹಸಿವಿನ ಬೆಲೆ ಮಡಿಕೇರಿ ನಗರಸಭೆಗೆ ತಿಳಿಯಲಿಲ್ಲವೇ , ಮಡಿಕೇರಿ ನಗರ ಸಭೆಯ ಆಡಳಿತ ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳು ಪ್ರತಿದಿನ ಇದೇ ಇಂದಿರಾ ಕ್ಯಾಂಟೀನನ್ನು ನಂಬಿದವರನ್ನು ಇಂದು ಊಟ ವಿಲದೇ ಉಪವಾಸ ಇರುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Ad Widget

ಮಡಿಕೇರಿ ನಗರದ ಇಂದಿರಾ ಕ್ಯಾಂಟೀನ್ ನಗರ ಸಭೆಯ ಸುಪರ್ದಿಗೆ ಬರುತ್ತದೆ ಈ ಇಂದಿರಾ ಕ್ಯಾಂಟೀನ್ ಗೆ ಮಡಿಕೇರಿ ನಗರ ಸಭೆ ವತಿಯಿಂದ ಒಂದು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲು ಆಗಲ್ಲವೇ ಎಂಬುವುದು ಜನರ ಪ್ರಶ್ನೆ ಮಾಡಿದ್ದಾರೆ.

Leave a Comment

Your email address will not be published. Required fields are marked *