ಬೆಳ್ತಂಗಡಿ ಠಾಣೆಯಿಂದ ಸಿ.ಐ. ಸತ್ಯನಾರಾಯಣ ಅಲ್ದೂರಿಗೆ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಆಲ್ದೂರಿನಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ಸತ್ಯನಾರಾಯಣ ಅವರು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಅಲ್ದೂರಿಗೆ ವರ್ಗಾವಣೆಗೊಂಡಿದ್ದಾರೆ.

Ad Widget ... ..

ಸತ್ಯನಾರಾಯಣ ಅವರು ವೃತ್ತ ನಿರೀಕ್ಷಕ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಆಲ್ದೂರಿಗೆ ತೆರಳಿದ್ದಾರೆ‌. ಇಲಾಖಾ ಸಿಬ್ಬಂದಿಗಳು ಅವರನ್ನು ಠಾಣೆಯಲ್ಲಿ‌ ಗೌರವಿಸಿದರು. ಬೆಳ್ತಗಂಡಿ ಪೊಲೀಸ್ ಠಾಣೆಗೆ ನೂತನ ಇನ್ ಸ್ಪೆಕ್ಟರ್ ಆಗಿ ನಾಗೇಶ್ ಕದ್ರಿ ನೇಮಕಗೊಳ್ಳುವ ಸಾಧ್ಯತೆಯಿದೆ‌ ಎಂದು ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *