ನಟ ಚೇತನ್ ಅಹಿಂಸಾಗೆ ಬಿಗ್ ರಿಲೀಫ್| ಜೂ.20ರವರೆಗೂ ಗಡಿಪಾರು ತಡೆಯಾಜ್ಞೆ ವಿಸ್ತರಣೆ

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರಿಗೆ ಒಸಿಐ ಮಾನ್ಯತೆ ರದ್ದಾಗುವ ವಿಚಾರವಾಗಿ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್ ನೀಡಿದೆ. ಇಂದು ಕೋರ್ಟ್‌ ತಡೆಯಾಜ್ಞೆಯನ್ನು ಜೂನ್.20ರವರೆಗೆ ವಿಸ್ತರಿಸಿ ರಿಲೀಫ್ ನೀಡಿದೆ.

Ad Widget ... ..

ನಟ ಚೇತನ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ, ಕೇಂದ್ರ ಗೃಹ ಸಚಿವಾಲಯ ಭಾರತದ ಸಾಗರೋತ್ತರ ನಾಗರಿಕ ( OCI) ವೀಸಾವನ್ನು ರದ್ದುಗೊಳಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಚೇತನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಅವರಿಗೆ ಒಸಿಐ ವೀಸಾ ರದ್ದು ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಲಾಗಿತ್ತು.

Ad Widget

ಇಂದಿನವರೆಗೆ ಅವರ ಒಸಿಐ ವೀಸಾ ರದ್ದತಿ ಮೇಲಿನ ತಡೆಯಾಜ್ಞೆ ನೀಡಲಾಗಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಜೂನ್.20ರವರೆಗೆ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಈ ಮೂಲಕ ನಟ ಚೇತನ್ ಗೆ ಮತ್ತೆ ರಿಲೀಫ್ ಸಿಕ್ಕಂತೆ ಆಗಿದೆ.

Leave a Comment

Your email address will not be published. Required fields are marked *