ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಬಂಟ್ವಾಳ: ಗ್ರಾಮ ಪಂಚಾಯತ್ ಅಧ್ಯಕ್ಷ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕನ್ಯಾನದಿಂದ ವರದಿಯಾಗಿದೆ.

Ad Widget ... ..

ಈ ಸಂಬಂಧ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ರಹಿಮಾನ್ ಎಂಬವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಪಿಲಿಚಂಡಿ ಗುಡ್ಡೆ ಎಂಬಲ್ಲಿನ ಒಂದು ಮನೆಯವರು ನೀರಿನ ಬಿಲ್ ಪಾವತಿಸದ ಕಾರಣ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ಬಂದಿದ್ದರು. ಬಿಲ್ ಪಾವತಿಸುವ ಭರವಸೆ ನೀಡಿದ ನಂತರ ಅವರು ತೆರಳಿದ್ದರು. ಇನ್ನು ಸಂಜೆ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ರಹಿಮಾನ್ ಬಿಲ್ ಕೇಳಲು ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇಲ್ಲದ್ದನ್ನು ನೋಡಿ ಒಳನ್ನುಗ್ಗಿ ಮನೆಯಲ್ಲಿದ್ದ 23 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಮತ್ತು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಯುವತಿ ಮತ್ತು ಮನೆಯವರು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

Leave a Comment

Your email address will not be published. Required fields are marked *