ಯುವಕನ ಕಿರುಕುಳಕ್ಕೆ ಯುವತಿ ನೇಣಿಗೆ ಶರಣು

ಸಮಗ್ರ ನ್ಯೂಸ್: ಕಾಸರಗೋಡು, ಮೇ, 26 ಯುವಕನೊರ್ವನ ಕಿರುಕುಳ ತಾಳಲಾರದೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಅಡೂರು ಚಾಮಕೊಚ್ಚಿ ಅನ್ನಪ್ಪಾಡಿಯ ಮುದ್ದ ನಾಯ್ಕ್ ರವರ ಪುತ್ರಿ ದಿವ್ಯಾ (26) ಅವರ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಿವ್ಯ ಬಂದಡ್ಕ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

Ad Widget ... ..

ಮೇ 25ರಂದು ದಿವ್ಯ ಅವರ ಮೃತದೇಹ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ದಿವ್ಯ ಮಂಗಳವಾರ ರಾತ್ರಿ ಲ್ಯಾಬ್ ನಲ್ಲಿ ಕೆಲಸ ಮುಗಿಸಿ ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದರು. ಸ್ಥಳದಲ್ಲಿ
ದಿವ್ಯಳ ಆತ್ಮಹತ್ಯೆ ಪತ್ರ ಲಭಿಸಿದ್ದು ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಯುವಕನೋರ್ವನನ್ನು ಕೇಂದ್ರೀಕರಿಸಿ ಅಡೂರು ಪೊಲೀಸರು ತನಿಖೆ ಅರಂಭಿಸಿದ್ದಾರೆ ಎನ್ನಲಾಗಿದೆ.

Ad Widget

Leave a Comment

Your email address will not be published. Required fields are marked *