ಅಬ್ಬರಿಸಿದ ಪೂರ್ವ ಮುಂಗಾರು| ಕರಾವಳಿಯಲ್ಲಿ ಎರಡು ಜೀವಗಳು ಬಲಿ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಗೆ ಎರಡು ಬಲಿಯಾಗಿದೆ. ಉಡುಪಿ ಜಿಲ್ಲೆಯ ಕಾಪು ಸಮೀಪದ ಮಜೂರು ಎಂಬಲ್ಲಿ ಚಲಿಸುತ್ತಿದ್ದ ಎರಡು ಆಟೋರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.

Ad Widget ... ..

ಕಾಪು ಕಡೆಯಿಂದ ಶಿರ್ವಾ ಕಡೆಗೆ ಮತ್ತು ಶಿರ್ವಾದಿಂದ ಕಾಪು ಕಡೆಗೆ ಪಯಣಿಸುತ್ತಿದ್ದ ಎರಡು ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ ಕಾಪುವಿನಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಪುಷ್ಪಾ(45) ಹಾಗೂ ಅವರ ಮೈದುನ ಸಾವನ್ನಪ್ಪಿದ್ದಾರೆ.

Ad Widget

ಶರೀಫ್ ಹಾಗೂ ದಿನೇಶ್ ಎಂಬವರ ರಿಕ್ಷಾದ ಮೇಲೆ ಮರ ಬಿದ್ದಿದೆ. ದುರಂತದಲ್ಲಿ ಅದೃಷ್ಟವಶಾತ್ ಎರಡೂ ಆಟೋಗಳ ಚಾಲಕರು ಹಾಗೂ ಇತರ ಪ್ರಯಾಣಿಕರು ಪಾರಾಗಿದ್ದಾರೆ. ರಿಕ್ಷಾ ಸಂಪೂರ್ಣ ಹಾನಿಗೀಡಾಗಿದೆ.

Leave a Comment

Your email address will not be published. Required fields are marked *