ಗರ್ಲ್​ಫ್ರೆಂಡ್​ ಜತೆಗಿದ್ದರೂ ಮತ್ತೊಂದು ಯುವತಿಯ ಮೇಲೆ ಕಾಮದಾಸೆ; ಆರೋಪಿ ಜೈಲಿಗೆ

ಸಮಗ್ರ ನ್ಯೂಸ್: ಬಸ್ ನಲ್ಲಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ‌ ಡ್ರೈವರ್​ ಮತ್ತು ಕಂಡಕ್ಟರ್​ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಸಂತ್ರಸ್ತೆಯು ತಮಿಳುನಾಡಿನ ತಿಂಡಿವನಂ ಮೂಲದವಳು. ಆರೋಪಿಯನ್ನು ಶರತ್​ ಎಂದು ಗುರುತಿಸಲಾಗಿದೆ.

Ad Widget ... ..

ಆರೋಪಿ ಶರತ್​ ತನ್ನ ಗರ್ಲ್​ಫ್ರೆಂಡ್​ ಜತೆ ಬಸ್​ ಏರಿದ್ದು ಬಳಿಕ ಆಕೆಯನ್ನು ಮಲಗಿಕೊಂಡಿದ್ದಾಳೆ. ಈ ವೇಳೆ ಸಂತ್ರಸ್ತೆ ಬೆಂಗಳೂರಿಗೆ ತಲುಪಲು ಪುದುಚೇರಿಯಿಂದ ಸ್ಲೀಪರ್​ ಕೋಚ್​ ಬಸ್​ ಏರಿದ್ದಳು. ಬಸ್​ ಸ್ವಲ್ಪ ದೂರ ಪ್ರಯಾಣಿಸಿದ ಕೂಡಲೇ ಹಿಂದಿನ ಸೀಟಿನಲ್ಲಿದ ಶರತ್​ ಮೈಮುಟ್ಟಲು ಶುರು ಮಾಡಿದ. ಆರಂಭದಲ್ಲಿ ಆಕಸ್ಮಿಕ ಅಂತಾ ಸಂತ್ರಸ್ತೆ ಸುಮ್ಮನಾಗಿದ್ದಳು. ಆದರೆ, ಆರೋಪಿ ಮತ್ತೆ ಅನುಚಿತವಾಗಿ ಸ್ಪರ್ಶಿಸಿ ಕ್ಷಮೆ ಕೋರಿದ್ದ. ಆಗಲೂ ಸಂತ್ರಸ್ತೆ ಸುಮ್ಮನಾಗಿದ್ದಳು. ಇದಾದ ಬಳಿಕ ಆರೋಪಿ ತನ್ನ ಬಟ್ಟೆಗಳನ್ನು ತೆಗೆದು ಸಂತ್ರಸ್ತೆಯಲ್ಲಿ ತಬ್ಬಿಕೊಳ್ಳಲು ಯತ್ನಿಸಿದ್ದಾನೆ.

Ad Widget

ಆತನ ವರ್ತನೆಯಿಂದ ಶಾಕ್​ ಆದ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾಳೆ. ಇತ್ತ ಆರೋಪಿ ಏನೂ ಮಾಡಿಯೇ ಇಲ್ಲ ಎನ್ನುವಂತೆ ಬಸ್​ನಿಂದ ಕೆಳಗೆ ಇಳಿಯಲು ಯತ್ನಿಸಿದ್ದಾನೆ. ಈ ವೇಳೆ ಬಸ್​ನಲ್ಲಿದ್ದ ಡ್ರೈವರ್​ ಮತ್ತು ಕಂಡಕ್ಟರ್​ ಆರೋಪಿಯ ಬಳಿ ಬಂದು ಧರ್ಮದೇಟು ನೀಡಲು ಶುರು ಮಾಡಿದರು. ಈ ವೇಳೆ ಎಚ್ಚರಗೊಂಡ ಆರೋಪಿ ಶರತ್​ ಗರ್ಲ್​ಫ್ರೆಂಡ್​ ಆತನಿಗೆ ಹೊಡೆಯದಂತೆ ತಡೆಯಲು ಯತ್ನಿಸಿದಳು. ಆರೋಪಿಗೆ ಹೊಡೆಯುವ ಮುನ್ನ ಬಸ್​ ಸಿಬ್ಬಂದಿಯೊಬ್ಬರು ಆತನ ಗರ್ಲ್​ಫ್ರೆಂಡ್​ ಕಪಾಳಕ್ಕೆ ಬಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಂತ್ರಸ್ತೆ ತನ್ನ ಕಷ್ಟವನ್ನು ವಿವರಿಸುತ್ತಿರುವ ಹಿನ್ನೆಲೆ ಧ್ವನಿಯನ್ನು ಕೇಳಬಹುದು.

ಆರೋಪಿಯ ಪ್ಯಾಂಟ್​ ಜಿಪ್​ ಓಪನ್​ ಆಗಿತ್ತು. ಇದೀಗ ಜಿಪ್​ ಹಾಕಿಕೊಂಡಿದ್ದಾನೆ ಎಂದು ವಿಡಿಯೋದಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ. ಹೊಡೆತವನ್ನು ಸಹಿಸದ ಆರೋಪಿ, ಕ್ಷಮಿಸಿ ಎಂದು ಬಸ್​ ಸಿಬ್ಬಂದಿ ಬಳಿ ಅಂಗಲಾಚಿದ್ದಾನೆ. ಆದರೂ ಬಿಡದೆ ಆತನನ್ನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಹಾಕಿದರು. ಬಸ್​ನಿಂದ ಕೆಳಗೆ ಇಳಿಯುವಾಗಲೂ ಇಬ್ಬರ ಮೇಲೆ ಬಸ್​ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಉರುಳಾಯನಪೇಟೆಯ ವ್ಯಾಪ್ತಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದು ಆರೋಪಿಯನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *