ಮಂಗಳೂರು: ಕೈ ಕೊಟ್ಟ ಕಾಂಗ್ರೆಸ್ ಟಿಕೆಟ್| ಜೆಡಿಎಸ್ ನಿಂದ ಸ್ಪರ್ಧೆಗಿಳಿದ ಮೊಯ್ದಿನ್ ಬಾವಾ

ಸಮಗ್ರ ನ್ಯೂಸ್: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ.

Ad Widget ... ..

ಕಾಂಗ್ರೆಸ್ ಪಕ್ಷ ಬಳಸಿ ಬಿಸಾಡಿದೆ. ದುಡ್ಡಿನ ಆಸೆಗಾಗಿ ಕಾಂಗ್ರೆಸ್ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. 80% ಜನಾಭಿಪ್ರಾಯ ಇದ್ದರು ನನಗೆ ಟಿಕೆಟ್ ಕೊಡದೆ 7% ಜನರ ಒಲವು ಇರುವ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದರು.

Ad Widget

ರಂಝಾನ್ ಅವಧಿಯಲ್ಲಿ ಕಳೆದ ಒಂದು ತಿಂಗಳಿಂದ ನನಗೆ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಹೋಗಿ ಬೇಡುವ ಪರಿಸ್ಥಿತಿ ಬಂದಿತ್ತು. ನನ್ನ ಹೆಸರಿಗೆ ಆಗಿದ್ದ ಬಿಫಾರಂ ಅನ್ನು ಡಿ.ಕೆ ಶಿವಕುಮಾರ್ ಅವರು ತಪ್ಪಿಸಿದ್ದಾರೆ ಎಂದು ಮೊಯ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *