Ad Widget .

Sullia: ತ್ಯಾಜ್ಯ ಎಸೆದವರಿಗೆ ಐವರ್ನಾಡು ಪಂಚಾಯತ್ ನಿಂದ ದಂಡ

ಸಮಗ್ರ ನ್ಯೂಸ್: ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಎಸೆದವರಿಂದಲೆ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಘಟನೆ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿಕೇರಿ ಎಂಬಲ್ಲಿ ಎ.17 ರಂದು ನಡೆದಿದೆ.

Ad Widget . Ad Widget .

ಎ.17 ರಂದು ನಾಟಿಕೇರಿ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಏ.18ರಂದು ನಾಟಿಕೇರಿ ಪರಿಸರಕ್ಕೆ ಭೇಟಿ ನೀಡಿ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿದ್ದಾರೆ. ಬಳಿಕೆ ತ್ಯಾಜ್ಯ ಬಿಸಾಡಿದ ಮೂಡಬಿದ್ರೆಯ ಯುವಕನನ್ನು ಪತ್ತೆ ಹಚ್ಚಿ ದಿನಾಂಕ ಏ.19ರಂದು ರೂ 5500.00 ದಂಡ ವಿಧಿಸಲಾಗಿದೆ. ಬಳಿಕ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತೆಂದು ತಿಳಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *