ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ| ಇಲ್ಲಿದೆ ವಿಡಿಯೋ

ಮುಂಬೈ: ಟ್ರಾಫಿಕ್ ಸಿಗ್ನಲ್‌ ಜಂಪ್‌ ಮಾಡಲು ಯತ್ನಿಸಿದ ಕಾರು ಚಾಲಕನನ್ನು ಪ್ರಶ್ನಿಸಿದ ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದಿರುವ ಘಟನೆಯೊಂದು ಮುಂಬೈ ನಗರದಲ್ಲಿ ನಡೆದಿದೆ.

Ad Widget ... ..

ಟ್ರಾಫಿಕ್ ಕಾನ್‌ಸ್ಟೆಬಲ್ ಸಿದ್ಧೇಶ್ವರ ಮಾಳಿ (37) ಎಂದು ಗುರುತಿಸಲಾಗಿದೆ .ಕಾನ್ಸ್‌ಟೇಬಲ್ ಸಿದ್ಧೇಶ್ವರ ಮಾಳಿ ಅವರು ಬ್ಲೂ ಡೈಮಂಡ್ ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕನನ್ನು ನಿಲ್ಲಿಸಲು ಪ್ರಯತ್ನಿಸಿದರು.
ಈ ವೇಳೆ ಟ್ರಾಫಿಕ್​ ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಕಾರು ಚಾಲಕ ಎಳೆದೊಯ್ದಿದ್ದಾನೆ. ಈತ ಕಂಠ ಪೂರ್ತಿ ಕುಡಿದ ಅಮಲಿನಲ್ಲಿ ಈ ಘೋರ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸ ವಿಚಾರಣೆ ವೇಳೆ ತಿಳಿಯಲಾಗಿದೆ.

Ad Widget

ಪೊಲೀಸನನ್ನು 20 ಕಿಲೋ ಮಿಟರ್‌ ಎಳೆದೊಯ್ದುರು ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಈ ಕೃತ್ಯವನ್ನು ಎಸಗಿದ ನೆರೂಲ್ ನಿವಾಸಿ ಆದಿತ್ಯ ಬೆಮ್ಡೆ (23) ಎಂದು ಗುರುತಿಸಲಾಗಿದ್ದು, ಅರೆಸ್ಟ್‌ ಮಾಡಲಾಗಿದೆ ಈ ಅಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Leave a Comment

Your email address will not be published. Required fields are marked *