ಸುಳ್ಯದ ಅಜ್ಜಾವರದಲ್ಲಿ ಕೆರೆಗೆ ಬಿದ್ದ ಕಾಡಾನೆ ಹಿಂಡು

ಸಮಗ್ರ ನ್ಯೂಸ್: ನಾಡಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡೊಂದು ತೋಟದೊಳಗಿನ ಕೆರೆಗೆ ಬಿದ್ದಿರುವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.

Ad Widget ... ..

ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಒದ್ದಾಡುತ್ತಿರುವುದಾಗಿ ವರದಿಯಾಗಿದೆ.

Ad Widget

ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿಗಳು ದಾಂಗುಡಿ ಇಟ್ಟಿದ್ದು, ಆನೆಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಅಜ್ಜಾವರ, ಆಲೆಟ್ಟಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಅಪಾರ ಪ್ರಮಾಣದ ಕೃಷಿನಾಶ ಸಂಭವಿಸುತ್ತಿರುತ್ತದೆ.

Leave a Comment

Your email address will not be published. Required fields are marked *