ಕೋಟಿ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್

ಸಮಗ್ರ ನ್ಯೂಸ್: ಸ್ಟಾರ್​​ ನಟ, ನಟಿಯರ ಜತೆ ದುಬಾರಿ ಬೆಲೆ ಬಾಳುವ ಕಾರುಗಳಿವೆ. ಇದೇ ಸಾಲಿಗೆ ಸ್ಯಾಂಡಲ್​ವುಡ್​​ ನಟ ರಮೇಶ್ ಅರವಿಂದ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ರಮೇಶ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ.

. Ad Widget . Ad Widget . Ad Widget

ರಮೇಶ್ ಅರವಿಂದ್ ಬಳಿ ಈಗಾಗಲೇ ಕೆಲ ಐಷಾರಾಮಿ ಕಾರುಗಳಿವೆ. ಈ ಬಾರಿ ರಮೇಶ್ ಅವರು ಐಷಾರಾಮಿ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಆನ್‌ರೋಡ್ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಕಪ್ಪು ಬಣ್ಣದ ಕಾರು ಇದಾಗಿದೆ.

. Ad Widget .

ಬೆಂಗಳೂರಿನ ಅಧಿಕೃತ ಮರ್ಸಿಡೀಸ್ ಬೆಂಜ್ ಕಾರು ಡೀಲರ್ ಬಳಿಯಿಂದ ರಮೇಶ್ ಅರವಿಂದ್ ಕಾರು ಖರೀದಿಸಿದ್ದಾರೆ. ಕಾರು ಡೆಲಿವರಿ ವೇಳೆ ರಮೇಶ್ ಅರವಿಂದ್ ಕುಟುಂಬ ಸಮೇತ ಶೋ ರೂಂಗೆ ಭೇಟಿ ನೀಡಿದ್ದರು. ಸಿಬ್ಬಂದಿಗಳು ಕಾರು ಕೀ ಹಸ್ತಾಂತರಿಸಿದ್ದಾರೆ. ಬಳಿಕ ಪೂಜೆ ನೆರವೇರಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.

Leave a Comment

Your email address will not be published. Required fields are marked *