IPL cricket| ಗುಜರಾತ್ ಗೆ 179 ಗುರಿ ನೀಡಿದ ಚೆನ್ನೈ

ಸಮಗ್ರ ನ್ಯೂಸ್: ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ (92 ರನ್, 50 ಎಸೆತ)ಭರ್ಜರಿ ಅರ್ಧಶತಕದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಗೆಲುವಿಗೆ 179 ರನ್ ಗುರಿ ನೀಡಿದೆ.

Ad Widget ... ..

ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.

Ad Widget

ಕೇವಲ 23 ಎಸೆತಗಳಲ್ಲಿ 50 ರನ್(3 ಬೌಂಡರಿ, 5 ಸಿಕ್ಸರ್)ಪೂರೈಸಿದ ಗಾಯಕ್ವಾಡ್ ಚೆನ್ನೈ ಸ್ಕೋರನ್ನು ಹೆಚ್ಚಿಸಿದರು. ಗಾಯಕ್ವಾಡ್ ಹೊರತುಪಡಿಸಿ ಮೊಯಿನ್ ಅಲಿ(23 ರನ್), ಶಿವಂ ದುಬೆ(19 ರನ್),ಎಂ.ಎಸ್. ಧೋನಿ (ಔಟಾಗದೆ 14 ರನ್), ಅಂಬಟಿ ರಾಯುಡು(12 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಗುಜರಾತ್ ಪರ ರಶೀದ್ ಖಾನ್(2-26), ಮುಹಮ್ಮದ್ ಶಮಿ(2-29) ಹಾಗೂ ಅಲ್ಜಾರಿ ಜೋಸೆಫ್(2-33)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

Leave a Comment

Your email address will not be published. Required fields are marked *