ಆಟವಾಡುತ್ತಿದ್ದಾಗ ಬಿದ್ದ ತೆಂಗಿನ ಮರ, ಬಾಲಕ‌ ಸಾವು, ಬಾಲಕಿ ಗಂಭೀರ

ಮೈಸೂರು: ತೆಂಗಿನಮರ ಬಿದ್ದು ಬಾಲಕನೋರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.
ದುರ್ಘಟನೆಯಲ್ಲಿ ಅಭಯ್‌ (6) ಬಾಲಕ ಮೃತಪಟ್ಟಿದ್ದಾನೆ. ಈ ವೇಳೆ ಜೊತೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget ... ..

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಾಲೆ ಇಲ್ಲದ ಕಾರಣ ಮಕ್ಕಳು ಮನೆಯಲ್ಲೇ ಇದ್ದು ಆಟವಾಡಿಕೊಂಡು ಕಾಲ ಕಳೆಯುತ್ತಿವೆ. ಅಂತೆಯೇ ಅಭಯ್‌ ಸ್ನೇಹಿತರೊಂದಿಗೆ ಗ್ರಾಮದ ತೋಟದಲ್ಲಿ ಕ್ರಿಕೆಟ್‌ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ತೆಂಗಿನಮರ ಮುರಿದು ಬಾಲಕನ ಮೇಲೆ ಬಿದ್ದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *