ಅತಿವೇಗದಿಂದ ಬಂದು ಕಾರ್ ಗೆ ಢಿಕ್ಕಿ ಹೊಡೆದ‌ ಬೈಕ್| ಕಾರ್ ನ ಮೇಲೆ ಹಾರಿ ಬಿದ್ದ ಸವಾರ

ಸಮಗ್ರ ನ್ಯೂಸ್: ಅತಿಯಾದ ವೇಗದಲ್ಲಿ ಬೈಕ್​ ಚಲಾಯಿಸಿ ನಿಯಂತ್ರಿಸಲಾಗದೆ ಬೈಕ್ ಕಾರ್​ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ನಗರದ ಮಹಾಲಕ್ಷ್ಮಿ ಮೇಟ್ರೋ ಸ್ಟೇಷನ್ ಬಳಿ ತಡರಾತ್ರಿ ನಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಬೈಕ್ ನಿಂದ ಹಾರಿ ಕಾರಿನ ಮೇಲೆ ಬಿದ್ದಿದ್ದಾನೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಸವಾರ ಬಚಾವ್‌ ಆಗಿದ್ದಾನೆ.

Ad Widget ... ..

ಕಿರಣ್ ಕುಮಾರ್ ಎಂಬ ಯುವಕ ಅತಿವೇಗದಲ್ಲಿ ಬೈಕ್​ ಚಲಾಯಿಸಿ ಕಾರ್​ಗೆ ಡಿಕ್ಕಿ ಹೊಡೆದಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದ ಕಿರಣ್​ ಕುಮಾರ್​​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

ಇನ್ನು ಕಿರಣ್​ ಕುಮಾರ್ ಒನ್ ವೇ ನಲ್ಲಿ ಬೈಕ್ ವೇಗದಿಂದ ಡ್ರೈವ್ ಮಾಡಿಕೊಂಡು ಬಂದಿದ್ದು, ಕಾರಿಗೆ ಡಿಕ್ಕಿ ಹೊಡೆದಿದ್ದಾನೆ‌.​​ ಬಾರ್​​​​ನಲ್ಲಿ ಕೆಲಸ ಮುಗಿಸಿಕೊಂಡು ಪಲ್ಸರ್ ಬೈಕ್​ನಲ್ಲಿ ಅತಿವೇಗ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಗಾಯಾಳು ಕಿರಣ್ ಮದ್ಯಪಾನ ಮಾಡಿರೋ ಶಂಕೆ ವಕ್ತವಾಗಿದೆ. ರಾಜಾಜಿನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *