Ad Widget .

ಪುತ್ತೂರು : ಪೆಲ೯ಂಪಾಡಿಯ ಸಕಾ೯ರಿ ಶಾಲೆಯ ಆವರಣದೊಳಗೆ ಅಕ್ರಮ ಪ್ರವೇಶ, ಆಸ್ತಿಗೆ ಹಾನಿ| ದೂರು ದಾಖಲು

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಪೆಲ೯ಂಪಾಡಿಯಲ್ಲಿರು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದ ಅಗಳುನ್ನು ಕೆಡವಿ, ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಶಾಲೆಯ ಆಸ್ತಿಗೆ ಹಾನಿ ಮಾಡಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

ದೂರುನಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಪ್ರಮೋದ್ ಕೆ.ಎಸ್., ಯಶೋದಾ ಬಾಬು ರಾಜೇಂದ್ರ, ಪವನ್ ದೊಡ್ಡಮನೆ, ಮಾಜಿ ಸದಸ್ಯರಾದ ಶಿವರಾಂ ಭಟ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಧರ್ ಪೂಜಾರಿ, ವೆಂಕಟ್ರಮಣ ಆಚಾರ್ಯ, ನಿವ್ರತ ಮುಖ್ಯ ಗುರುಗಳಾದ ವೀರಪ್ಪ ಮಾಸ್ಟರ್, ಲಕ್ಷ್ಮಣ ನಾಯ್ಕ ಇದ್ದರು.

Ad Widget . Ad Widget .

ಒತ್ತೆಕೋಲ ಸಮಿತಿ ಅಧ್ಯಕ್ಷ ತಾರಾ ಪ್ರಸಾದ್ ರಾಮಕಜೆ ಮತ್ತು ಇತರರು ಶನಿವಾರ ತಡರಾತ್ರಿ ಹಿಟಾಚಿ ಬಳಸಿ ಶಾಲಾ ಆಸ್ತಿಗೆ ಹಾನಿ ಮಾಡಿ ಶಾಲೆಗೆ ನಷ್ಟ ಉಂಟು ಮಾಡಿದ್ದು ನಷ್ಟ ಭರಿಸಿ ಅಗಳನ್ನು ಪುನಃ ನಿಮಿ೯ಸಿಕೊಡಬೇಕು ಎಂದು ಮುಖ್ಯೋಪಾಧ್ಯಾಯರು ನೀಲಾವತಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಪೆಲ೯ಂಪಾಡಿ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕ ಸುಹಾಸ್ ಕ್ರಮ. ಕೈಗೊಳ್ಳುವುದಾಗಿ ಹೇಳಿದ್ದಾರೆ.

Leave a Comment

Your email address will not be published. Required fields are marked *